ಗ್ಲಾಸಾಪ್ಟರಿಸ್ - 
ಟೆರಿಡೋಸ್ಟರ್ಮ್ ಸಸ್ಯಕುಲಕ್ಕೆ ಸೇರಿದ ಅತಿ ಮುಖ್ಯವಾದ ಒಂದು ಗತವಂಶೀಯ ಸಸ್ಯಜಾತಿ. ಇದು ಪೇಲಿಯೋಜೊóೀಯಿಕ್ ಯುಗದ ಉತ್ತರಾರ್ಧ ಮತ್ತು ಮಿಸೋಜೊóೀಯಿಕ್ ಯುಗದ ಪೂರ್ವಾರ್ಧದಲ್ಲಿ ಗೋಂಡ್ವಾನ ಖಂಡದ ಸಸ್ಯ ವೈಶಿಷ್ಟ್ಯವಾಗಿತ್ತು. ಈ ಸಸ್ಯದೊಡನೆ ಕಂಡುಬರುವ ಗಂಗಮಾಪ್ಟರಿಸ್, ವರ್ಟಿಬ್ರೇರಿಯ ಮುಂತಾದ ಸಸ್ಯಜಾತಿಗಳನ್ನೆಲ್ಲ ಕೂಡಿಸಿ ಗ್ಲಾಸಾಪ್ಟರಿಸ್ ಸಸ್ಯ ಸಮೂಹ ಎಂದು ಕರೆಯಲಾಗಿದೆ. ಇದು ಗೋಂಡ್ವಾನ ಯುಗದ ಮೊದಲಲ್ಲಿ ಹಿಮ ಯುಗದ ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಪೂರ್ವಾರ್ಧದಲ್ಲಿ ವಿಶೇಷವಾಗಿತ್ತು. ಇದರ ಅವಶೇಷಗಳು ಭಾರತದಲ್ಲೇ ಅಲ್ಲದೆ ಗೋಂಡ್ವಾನ ಖಂಡದ ಭಾಗಗಳಾಗಿದ್ದ ಆಫ್ರಿಕ, ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಗಳಲ್ಲೂ ಕಂಡುಬಂದಿವೆ.     
 
ಗ್ಲಾಸಾಪ್ಟರಿಸ್ ಸಸ್ಯದ ಎಲೆಗಳು ಸರಳ, ಅಂಚು ನೀಳ. ಪರ್ಣಭಾಗದಲ್ಲಿ ಮಧ್ಯನಾಳ ಉಂಟು. ಕಮಾನಿನಕಾರದ ಕಿರುನಾಳ ವಿನ್ಯಾಸವನ್ನು ಕಾಣಬಹುದು. ಗ್ಲಾಸಾಪ್ಟರಿಸ್ ಎಲೆಯಲ್ಲಿ ಪುನರುತ್ಪತ್ತಿ ಅಂಗಗಳು ಇರುವಿಕೆ ನಿರ್ದಿಷ್ಟವಾಗಿಲ್ಲ. ಗಂಗಮಾಪ್ಟರಿಸ್ ಎಲೆ ಗ್ಲಾಸಾಪ್ಟರಿಸ್ ಎಲೆಯಂತೆಯೇ ಇದೆ. ಅದರೆ ಅದರಲ್ಲಿ ಮಧ್ಯನಾಳ ಇಲ್ಲ. ಗ್ಲಾಸಾಪ್ಟರಿಸ್ ಸಸ್ಯದ ಅವಶೇಷಗಳು ಭಾರತದ ಗೊಂಡ್ವಾನ ಸ್ತರಗಳ ಕೆಳವಿಭಾಗಕ್ಕೆ ಸೇರಿದ ತಾಲಚೀರ್, ಬರಕಾರ್ ಮತ್ತು ರಾಣಿಗಂಜ್ ಹಂತಗಳಲ್ಲಿ ಕಂಡುಬಂದಿವೆ.   (ಎಂ.ವಿ.ಎ.ಎಸ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ